ಜಗತ್ತಿನ ಭಾರವನ್ನೆ ಹೊತ್ತಿದ್ದೇವೆ ಎನ್ನುವವರಿಗೆ ಬ್ರಹ್ಮಪುರಿಯ ಭಿಕ್ಷುಕನ ಪತ್ರ

ಕೆಲವು ತಿಂಗಳುಗಳಿಂದ ಹಲವಾರು ಕಾರಣಗಳಿಂದಾಗಿ ನಾನು ತುಂಬಾ ಬ್ಯೂಸಿಯಾಗಿಬಿಟ್ಟಿದ್ದೆ…. ಇಲ್ಲ ಆ ರೀತಿ ಅಂದು ಕೊಂಡಿದ್ದೆ! ಆಫೀಸಿನ ಕೆಲಸ, ಮನೆಯ ನಿರ್ಮಾಣ, ಕೆಲವು ಅನಿರೀಕ್ಷಿತ ಪ್ರಯಾಣ ಹೀಗೆ ಬ್ಯೂಸಿಯಾಗಿದ್ದೇನೆ ಎಂದು ಹೇಳುವುದಕ್ಕೆ ನನಗೆ ನನ್ನದೆಯಾದ ಹಲವಾರು ಕಾರಣಗಳೂ ಇದ್ದವು. ಅವುಗಳೆಲ್ಲವೂ ನಿರ್ಲಕ್ಷಿಸ ಬಹುದಾದ ಕ್ಷುಲ್ಲಕ ಕಾರಣಗಳೇನು ಅಲ್ಲ. ನಿಜವಾಗಿಯೂ ನನ್ನ ಸಮಯವನ್ನು ಸಂಪೂರ್ಣವಾಗಿ ಅಪೇಕ್ಷಿಸುವ ಕೆಲಸಗಳವು! ಇವೆಲ್ಲವೂ ಒಂದರ ಮೇಲೊಂದು ಸಾಲುಸಾಲಾಗಿ ಬರುತ್ತಲೇ ಇದ್ದವು. ಹಾಗಾಗಿ ಯಾರೇ ಸ್ನೇಹಿತರು ಫೋನ್ ಮಾಡಲಿ, ಎಲ್ಲಾದರೂ ಒಂದು ಗಳಿಗೆ ಸಿಗೋಣ … Continue reading ಜಗತ್ತಿನ ಭಾರವನ್ನೆ ಹೊತ್ತಿದ್ದೇವೆ ಎನ್ನುವವರಿಗೆ ಬ್ರಹ್ಮಪುರಿಯ ಭಿಕ್ಷುಕನ ಪತ್ರ

ಮುಗಿಲಿನ ಭಾವಾಭಿವ್ಯಕ್ತಿ ಈ ಮಳೆ

ಮಳೆಗಾಲ ಶುರುವಾದಂತಿದೆ. ಒಂದೇ ಸಮನೆ ಬಿಟ್ಟು ಬಿಡದೆ ನಿಧಾನಕ್ಕೆ ಮಳೆ ಹೊಯ್ತಾ ಇದೆ. ಪ್ರಕೃತಿಯು ಅಮೃತವರ್ಷಿಣಿ ರಾಗದ ಪ್ರಸ್ತುತಿಯನ್ನು ಅದಾಗಲೇ ಶ್ರುತಿ ಮಾಡಿಕೊಂಡು ಪ್ರಾರಂಭಿಸಿಯಾದಂತಿದೆ. ಕೊನೆಯಿಂದ ಪ್ರಾರಭಿಸಿದ ಸಂಗೀತ ಕಛೇರಿಯಂತೆ, ಮೊದಲಿಗೆ ಸಿಡಿಲು ಗುಡುಗುಗಳ ಜುಗಲಬಂದಿಯೊಂದಿಗೆ ಪ್ರಾರಂಭಿಸಿ, ನಂತರ ಜೋರಾಗಿ ಸುರಿವ ಧಾರಾಕಾರ ಮಳೆಯಾಗಿ ಧೃತ್‌ನ ಗತಿ ಪಡೆದು, ಕೊನೆಗೆ ಅವೆಲ್ಲಾ ಮುಗಿದು ಈಗ ನಿಧಾನದ ಆಲಾಪನೆಗೆ ಜಡಿಮಳೆಯ ಹಂತಕ್ಕೆ ಬಂದಿದೆ. ಹೆಚ್ಚಿನ ಜನಕ್ಕೆ ಈ ಆಲಾಪನೆಯಂತಹ ಜಡಿಮಳೆ ತುಂಬಾ ಬೋರ್‌ ಕಿರಿಕಿರಿ ಅನ್ನಿಸುತ್ತದೆ. ಆಲಾಪನೆಯನ್ನು ಇಷ್ಟಪಡುವ … Continue reading ಮುಗಿಲಿನ ಭಾವಾಭಿವ್ಯಕ್ತಿ ಈ ಮಳೆ

ಉಚಿತಗಳ ಆಮಿಷವೆಂಬ ಅಂಗೈ ಹುಣ್ಣಿಗೊಂದು ಕನ್ನಡಿ!!

ನಾನು ಪ್ರಸ್ತುತ ರಾಜಕೀಯ ವಿಚಾರಗಳನ್ನು ಕುರಿತು ಬರೆಯಬಾರದೆಂದು ನಿಯಮ ಮಾಡಿಕೊಂಡಿದ್ದೆ. ಕಾರಣವಿಷ್ಟೆ , ಎಷ್ಟೇ ವಸ್ತುನಿಷ್ಟವಾಗಿ ರಾಜಕೀಯದ ಬಗ್ಗೆ ಬರೆದರೂ, ಅದನ್ನು ವಿರೋಧಿಸುವ ಅನುಮೋದಿಸುವ ಜನಗಳಿರುತ್ತಾರೆ. ಹಾಗೆ ವಿರೋಧಿಸುವವರ, ಅನುಮೋದಿಸುವವರ ಹಿಂದೆ ಸಾವಿರಾರು ಪೂರ್ವಾಗ್ರಹಗಳಿರುತ್ತವೆ. ಆ ಪೂರ್ವಾಗ್ರಹಗಳ ನಡುವೆ ಬರವಣಿಗೆಯ ಮೂಲ ಆಶಯ, ಅದರ ಹಿಂದಿನ ಕಳಕಳಿ ಅರ್ಥವಾಗದೇ ಹೋಗಬಹುದು ಎಂಬ ಅನುಮಾನವಿದೆ. ಅಷ್ಟೇ ಅಲ್ಲದೇ, ಎಷ್ಟೇ ವಸ್ತುನಿಷ್ಟವಾಗಿ ಯೋಚಿಸುತ್ತೇನೆ ಎಂದುಕೊಂಡರು ನನ್ನ ಬರಹವೂ ಕೂಡ ಪೂರ್ವಾಗ್ರಹದಿಂದ ಸಂಪೂರ್ಣ ಮುಕ್ತವಾಗಿದೆ ಎಂದು ಹೇಳಲಾರೆ. ಅದಕ್ಕಿಂತ ಮುಖ್ಯವಾಗಿ ಪ್ರತಿ … Continue reading ಉಚಿತಗಳ ಆಮಿಷವೆಂಬ ಅಂಗೈ ಹುಣ್ಣಿಗೊಂದು ಕನ್ನಡಿ!!

ಕ್ರಾಂತಿಕಾರನ ರೋಚಕ ಬದುಕಿನ ಪುಟದಲ್ಲಿನ ಒಂದು ವಿಲಕ್ಷಣ ಪ್ರೇಮ ಕಥೆಯ ಅಧ್ಯಾಯ!!

ಸ್ವಾತಂತ್ರ ಸಂಗ್ರಾಮದಲ್ಲಿ ತಮ್ಮ ಬದುಕನ್ನೇ ಧಾರೆಯೆರದ ಕ್ರಾಂತಿಕಾರರ ಬದುಕನ್ನು ಓದುತ್ತಿದ್ದರೆ ಮೈ ಕಂಪಿಸುತ್ತದೆ. ಇವತ್ತು ನಾನು ಅಂತಹ ಒಬ್ಬ ಕ್ರಾಂತಿಕಾರಿಯ ಬದುಕಿನ ನೈಜ ಕಥೆಯ ಕುರಿತು ಬರೆಯುತ್ತಿದ್ದೇನೆ. ಅಂಡಮಾನಿನ ಕಾಲಾಪಾನಿಯಲ್ಲಿ ಜೈಲುವಾಸ, ಅಲ್ಲಿನ ದುರ್ಭರ ಶಿಕ್ಷೆಗೊಳಪಟ್ಟು ಮಾನಸಿಕ ಸ್ವಾಸ್ಥ್ಯವನ್ನೇ ಕಳೆದುಕೊಂಡ ಒಬ್ಬ ಹೋರಾಟಗಾರನ ಕಥೆಯಿದು. ನಂತರ ಮದ್ರಾಸಿನಲ್ಲಿ ಚಿಕಿತ್ಸೆಗೊಂಡು ಗುಣವಾಗಿ ಬಂದು ಪುನಃ ಕ್ರಾಂತಿಗೆ ಧುಮುಕಿದ ಒಬ್ಬ ದೇಶ ಪ್ರೇಮಿಯ ಸಾಹಸದ ಕಥೆಯಿದು. ಸ್ವತಂತ್ರ ಭಾರತದಲ್ಲಿ ಮೆರೆಸಬೇಕಾಗಿದ್ದ ಇಂತಹ ವ್ಯಕ್ತಿಯನ್ನು ಮರೆತ ನಮ್ಮ ದೇಶದ ಕೃತಘ್ನತೆಯ ಕಥೆಯಿದು. … Continue reading ಕ್ರಾಂತಿಕಾರನ ರೋಚಕ ಬದುಕಿನ ಪುಟದಲ್ಲಿನ ಒಂದು ವಿಲಕ್ಷಣ ಪ್ರೇಮ ಕಥೆಯ ಅಧ್ಯಾಯ!!

ಕೆಲವು ಪ್ರಶ್ನೆ ಹಾಗೆ ಉಳಿದಿದೆ ನನ್ನಲ್ಲಿ. ನಿನ್ನ ಉತ್ತರ ಬೇಕು. ಬಂದು ಹೇಳಿಬಿಡು!!

ಇದನ್ನು ಬರಯಲೇ ಬೇಕೆಂಬ ಒತ್ತಡ ಒಳಗಿನಿಂದ ಒದ್ದುಕೊಂಡು ಬರುತ್ತಿದೆ. ಎಲ್ಲವನ್ನೂ ನಿನಗೆ ಹೇಳಿಬಿಡಬೇಕು, ಇನ್ನು ಹೇಳುವುದಕ್ಕೆ ಕೇಳುವುದಕ್ಕೆ ಏನೂ ಉಳಿದಿಲ್ಲವೆಂಬಂತೆ ನಿನಗೆ ಎಲ್ಲವನ್ನೂ ಒಪ್ಪಿಸಬೇಕು. ಭಾವದ ಒರತೆಯಿಂದ ಒಲವು ಬತ್ತದಂತೆ ಎಲ್ಲವನ್ನೂ ನಿನಗೆ ಸಮರ್ಪಿಸಬೇಕು. ಈ ನಲವತ್ತು ವರುಷಗಳಲ್ಲಿ ಹೇಳಲಾರದೆ ಉಳಿಸಿದ ಸಾವಿರ ಮಾತುಗಳನ್ನು, ಕೇಳಬೇಕೆಂದಿರುವ ಕೆಲವು ಪ್ರಶ್ನೆಗಳನ್ನು ನಿನ್ನ ಮುಂದೆ ತೆರೆದಿಡಬೇಕೆಂಬ ಒತ್ತಡ. ಯಾಕೆ ಹೀಗೆ ಈ ವಿಲಕ್ಷಣ ಹೊತ್ತಿನಲ್ಲಿ ಈ ರೀತಿಯ ಒತ್ತಡ ಕಾಡುತ್ತಿದೇಯೋ ಗೊತ್ತಿಲ್ಲ. ಕೇಳುವುದಕ್ಕೆ ನೀನು ಈಗ ಜೊತೆಯಲ್ಲಿ ಇಲ್ಲ, ಉತ್ತರುಸುವ … Continue reading ಕೆಲವು ಪ್ರಶ್ನೆ ಹಾಗೆ ಉಳಿದಿದೆ ನನ್ನಲ್ಲಿ. ನಿನ್ನ ಉತ್ತರ ಬೇಕು. ಬಂದು ಹೇಳಿಬಿಡು!!

Elections, Simpson Paradox and Unveiling the truth

Now the Karnataka elections are over and the results are out. In the last few weeks, all our TV News channels, social media so-called experts, and political survey teams bombarded with lots of surveys, debates, conclusions etc. The interesting part is, each one is claiming that their analysis is backed with solid data. However, the … Continue reading Elections, Simpson Paradox and Unveiling the truth

ಮತ ಚಲಾಯಿಸುವ ಕೈ ಬೆರಳಿನ ವಿಕಾಸದ ಕಥೆ

ಸುಮಾರು 2೦೦ ಮಿಲಿಯನ್ ವರುಷಗಳ ಹಿಂದೆ, ವಿಕಾಸತೆಯು(Evolution) ನಮ್ಮ ಪೂರ್ವಿಕರಲ್ಲಿ ಒಂದು ಮಹತ್ವಪೂರ್ಣ ಬದಲಾವಣೆಯನ್ನು ತಂದಿತು. ಅದುವೇ ಅಂಟಿಕೊಂಡಿದ್ದ ಕೈ ಬೆರಳುಗಳು ಪ್ರತ್ಯೇಕಗೊಂಡಿದ್ದು. ಇದರ ಪರಿಣಾಮವಾಗಿ ಮನುಷ್ಯನಿಗೆ (Homo sapiens) ಆಯುಧ ಹಿಡಿಯಲು ಸಾಧ್ಯವಾಯಿತು. ಆಯುಧ ಹಿಡಿಯಲು ಪ್ರಾರಂಭಿಸಿದ ನಂತರ ಸಹಜವಾಗಿ ಯೋಜನೆಗಳನ್ನು ಹಾಕಲು ಕಲಿತ. ಕಡಿಮೆ ಶ್ರಮದಲ್ಲಿ ಹೇಗೆ ಆಹಾರ ಪಡೆಯುವುದು ಎಂದು ಯೋಚಿಸಲು ಪ್ರಾರಂಭಿಸಿದ. ಇದರಿಂದಲೇ ತನ್ನ ಬುದ್ದಿಯನ್ನು ಹರಿತಗೊಳಿಸುವ ಮುಖ್ಯ ಪ್ರೇರಣೆ ಕೂಡ ಪಡೆದ. ಕೈ ಬೆರಳುಗಳನ್ನು ಬಳಸಿಕೊಂಡು ವಿಕಾಸದ ಓಟದಲ್ಲಿ ಮೊದಲಿಗನಾದ. … Continue reading ಮತ ಚಲಾಯಿಸುವ ಕೈ ಬೆರಳಿನ ವಿಕಾಸದ ಕಥೆ

1946ರ ನೌಕಾ ದಂಗೆ : ಭಾರತ ಸಂಗ್ರಾಮದ ಕೊನೆಯ ಯುದ್ದ

‘1947 ಆಗಸ್ಟ 15 ರಂದು, ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಹೋರಾಟದ ಫಲವಾಗಿ ಬ್ರಿಟಿಷ್ ಆಳ್ವಿಕೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು’ ಹೀಗೆ ಸಾಮಾನ್ಯವಾಗಿ ನಾವೆೆಲ್ಲರೂ ಪಠ್ಯ ಪುಸ್ತಕದಲ್ಲಿ ಓದಿದ ವಿಷಯ. ಗಾಂಧಿಯವರ ಅಹಿಂಸಾತ್ಮಕ ಹೋರಾಟಕ್ಕೆ ಇತಿಹಾಸದಲ್ಲಿ ತನ್ನದೇ ಸ್ಥಾನವಿದ್ದರೂ, ಕೇವಲ ಅದರಿಂದ ಮಾತ್ರವೇ ಸ್ವಾಂತತ್ರ್ಯ ಬಂದಿತೇ? ಸ್ವಲ್ಪ ಗಮನಿಸಿ ನೋಡಿದರೆ ಗಾಂಧಿಯವರ ಅಹಿಂಸಾತ್ಮಕ ಹೋರಾಟವು 1920ರಲ್ಲೇ ಪ್ರಾರಂಭವಾಗಿತ್ತು. ಅಹಿಂಸೆ, ಸತ್ಯಾಗ್ರಹ ಮಾತ್ರದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ನಿಜವಾದರೆ ೨೭ ವರುಷಗಳವರೆಗೆ ಯಾಕೆ ಕಾಯಬೇಕಾಯಿತು? ಅದು ಹೋಗಲಿ, 1942 ರಲ್ಲಿ … Continue reading 1946ರ ನೌಕಾ ದಂಗೆ : ಭಾರತ ಸಂಗ್ರಾಮದ ಕೊನೆಯ ಯುದ್ದ

ಕಾಲದ ಮೂರ್ತ ಸ್ವರೂಪ- ಮಹಾಕಾಲನ ದರುಶನದ ಅನುಭವ – ಭಾಗ೧

ತುಂಬಾ ದಿನಗಳಿಂದ ಉಜ್ಜಯನಿಗೆ ಹೋಗಬೇಕೆಂಬ ಆಸೆಯಿತ್ತು. ನನ್ನ ಆಸೆಯ ಹಿಂದೆ ಹಲವಾರು ಕಾರಣಗಳೂ ಇದ್ದವು. ನಾನು ಬಹಳ ಆರಾಧಿಸುವ ಕೃಷ್ಣ ಪರಮಾತ್ಮ ವಿದ್ಯಾಭ್ಯಾಸ ಮಾಡಿದ್ದು ಇಲ್ಲಿಯ ಸಂದೀಪನಿ ಆಶ್ರಮದಲ್ಲಿಯೇ! ಸಂಸ್ಕೃತ ಸಾಹಿತ್ಯವನ್ನು ಆಸ್ಥೆಯಿಂದ ಕಲಿಯುತ್ತಿರುವ ನನ್ನಂತವರಿಗೆ ಆರಾಧ್ಯನಾದ ಕವಿ ಕುಲಗುರು ಕಾಳಿದಾಸ ಹುಟ್ಚಿದ್ದು ಇಲ್ಲಿಯೇ! ನನ್ನ ಜ್ಯೋತಿಷ್ಯದ ಗುರುಗಳು  ಪಾಠ ಮಾಡುತ್ತಿರುವ ಬೃಹಜ್ಜಾತಕ ಗ್ರಂಥವನ್ನು ಬರೆದ ವರಾಹಮಿಹಿರ ಕೂಡ ಇಲ್ಲಿಯವನೇ! ಖಗೋಳದಲ್ಲಿ ಆಸಕ್ತಿಯಿರುವ ನನಗೆ ಸೂರ್ಯನು ಉತ್ತರಾಯಣದಲ್ಲಿ ಉತ್ತರಕ್ಕೆ ಸಾಗುತ್ತಾ ತಲುಪುವ ಕೊನೆಯ ಬಿಂದು ಇರುವುದು ಇಲ್ಲಿಯೇ! ಹಾಗೂ … Continue reading ಕಾಲದ ಮೂರ್ತ ಸ್ವರೂಪ- ಮಹಾಕಾಲನ ದರುಶನದ ಅನುಭವ – ಭಾಗ೧

ಬೂದಿಯಿಂದ ಹಾರಿ ಬಂದ ಬೀಜ ಮೊಳಕೆಯೊಡೆದು ಗಿಡವಾದಲ್ಲಿ…..ಕಾಲಚಕ್ರ!

ಬೂದಿಯಿಂದ ಹಾರಿ ಬಂದ ಬೀಜ ಮೊಳಕೆಯೊಡೆದು ಗಿಡವಾದಲ್ಲಿ; ಗಿಡವು ಬೆಂದು ಬಾಯಾರಿ ಮಳೆಗಾಗಿ ಕಾಯುವ ಬಯಕೆಯಲ್ಲಿ; ಬಯಕೆಗೆ ಕರಗಿ ಹನಿಯಾದ ತಂಪಿನ ಮಳೆಯಲ್ಲಿ; ತಂಪಿನ ಮಳೆಯಲ್ಲಿ ಅರಳಿದ ಹೂವ ಕುಸುಮ ಮಾಲೆಯಲ್ಲಿ; ಕುಸುಮಮಾಲೆಯ ಮುಡಿದ ನವವಧುವಿನ ನಾಚಿಕೆಯಲ್ಲಿ; ನವವಧುವಿನ ನಾಚಿಕೆಯನು ಕರಗಿಸುವ ಪ್ರೇಮದ ಅಪ್ಪುಗೆಯಲ್ಲಿ; ಪ್ರೇಮದ ಅಪ್ಪುಗೆಯಲ್ಲಿ ಕರಗಿ ಎರಡೊಂದಾಗುವ ದೇಹಾದ್ವೈತದಲ್ಲಿ; ದೇಹಾದ್ವೈತದಲ್ಲಿ ಅಂಕುರಿಸಿದ ಪ್ರೇಮದ ಹೊಸ ಜೀವಸೆಲೆಯಲ್ಲಿ; ಹೊಸಜೀವಸೆಲೆಯು ಮೂರ್ತ್ತವೆತ್ತು ಜನ್ಮತಾಳುವಾಗಾಗುವ ನೋವಿನಲ್ಲಿ; ನೋವಿನಲ್ಲೇ ಮಗುವಿನ ಅಳುವಿನ ದನಿಗೆ ಅರಳುವ ಮಾತೃತ್ವದಲ್ಲಿ; ಮಾತೃತ್ವವೇ ಹರಿದು ಮೊಲೆಹಾಲನುಣಿಸಿ … Continue reading ಬೂದಿಯಿಂದ ಹಾರಿ ಬಂದ ಬೀಜ ಮೊಳಕೆಯೊಡೆದು ಗಿಡವಾದಲ್ಲಿ…..ಕಾಲಚಕ್ರ!